ಓಬೆರಾನ್: ಯುರೇನಸ್ ಗ್ರಹದ ಅತಿದೂರದ ಉಪಗ್ರಹ. ಸರ್ವಿಲಿಯಂ ಹರ್ಷೆಲ್ ಎಂಬ ಖಗೋಳವಿಜ್ಞಾನಿ ಇದರ ಇರವನ್ನು 1787ರಲ್ಲಿ ಕಂಡ. ಮಾತೃಗ್ರಹದಿಂದ ಓಬೆರಾನಿನ ಸರಾಸರಿ ದೂರ 3,64,000 ಮೈಲಿಗಳು. ಒಂದು ಪರಿಭ್ರಮಣೆಯ ಅವಧಿ (ಅಂದರೆ ಉಪಗ್ರಹದ ವರ್ಷ) 13 ದಿ. 11 ಗಂ. 7ಮಿ, ಓಬೆರಾನಿನ ವ್ಯಾಸ (500) ಮೈಲಿಗಳೆಂದು ಅಂದಾಜು.	*

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ